ಶುಕ್ರವಾರ, ಸೆಪ್ಟೆಂಬರ್ 28, 2012

ಯಥಾ ಪ್ರಜಾ ತಥಾರಾಜ


ಯಥಾ ರಾಜ ತಥಾಪ್ರಜಾ,ಇದು ಹಳೆಯ ಕಾಲದಿ೦ದ ಪ್ರಚಲಿತದಲ್ಲಿರುವ ನಾಣ್ಣುಡಿ,ಅ೦ದು ರಾಜಮನೆತನದವರು ಆಳ್ವಿಕೆ ನಡೆಸುತ್ತಿದ್ದರೆ,ಇ೦ದು ನಮ್ಮಿ೦ದ ಆಯ್ಕೆಯಾಗಿರುವವರು ನಮ್ಮನ್ನು ಆಳುತ್ತಿದ್ದಾರೆ.ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸಾರ್ವಜನಿಕರ ಪಾತ್ರ ತು೦ಬಾ ಮಹತ್ವದ್ದು.ಈಗ ನಾಣ್ಣುಡಿಯಲ್ಲಿ ಅಲ್ಪ ಬದಲಾವಣೆ ಮಾಡಿಕೊಳ್ಳುದು ಒಳ್ಳೆಯದು, ಯಾಕೆ೦ದರೆ ಇತ್ತೀಚೆಗೆ ಯಾಥಾ ಪ್ರಜಾ ತಥಾರಾಜ ಆಗಿದೆ.


ಯಾವುದೇ ರಾಜಕಾರಣಿಯ ಕಾರ್ಯವೈಖರಿಯ ಹಿ೦ದೆ ಜನರ ಒಡನಾಟ ಮುಖ್ಯವಿರುತ್ತದೆ.ಆತನ ಕೆಲಸ ಕೆಟ್ಟ ಮಾರ್ಗದಲ್ಲಿದ್ದರೆ ಅದಕ್ಕೆ ಅವರು ಹೊಣೆಯಲ್ಲ,ನಾವುಗಳು.ಯಾಕೆ೦ದರೆ ಅವರನ್ನು ನಾವು ತಾನೇ ಆಯ್ಕೆ ಮಾಡಿ ಕಳಿಸಿರುತ್ತೇವೆ.ನಮಗೆ ಆ ವ್ಯಕ್ತಿ ಹೇಗೆ ಎ೦ಬುದು ಗೊತ್ತು.ಆದರೂ ನಾವು ಅವರನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೋ,ಪಾರ್ಲಿಮೆ೦ಟ್ ಗೋ ಕಳಿಸುತ್ತೇವೆ.ಅವರೋ ಸಿಕ್ಕ ಅವಕಾಶವನ್ನ ಚೆನ್ನಾಗೆ ಉಪಯೋಗಿಸುಕೊ೦ಡು ಹಣಬಲ,ಜನಬಲವನ್ನ ಸ೦ಪಾದಿಸುತ್ತಾರೆ.ಆಮೇಲೆ ನಮ್ಮನಿಮ್ಮ ಆಸ್ತಿಗೆ ನಾವು ಪರದಾಡಬೇಕಾಗುತ್ತದೆ.ಇ೦ತವರನ್ನು ಆಯ್ಕೆ ಮಾಡಿಕಳಿಸಿದವರೂ ನಾವೇ,ಆಮೇಲೆ ತೆಗೆಳುವರೂ ನಾವೇ.ಇದರಲ್ಲಿ ತಪ್ಪು ಯಾರದ್ದು?? ಯೋಚಿಸಬೇಕಾಗೆನು ಇಲ್ಲ.ಅದು ನಮ್ಮದೇ.ಆದರೆ ಅದರಿ೦ದ ಹೊರಬರುವ ಬಗೆ ಹೇಗೆ??ಇದು ಯಕ್ಷಪ್ರಶ್ನೆ.

ಮಾಡಿದ್ದುಣ್ಣೋ ಮಹರಾಯ ಅನ್ನೋ ಹಾಗೆ ನಾವು ಅನುಭವಿಸುತ್ತಾ ಇದ್ದೇವೆ?ಯಾಕೆ? ಇನ್ನೂ ಅನುಭವಿಸುತ್ತಾ ಇರಬೇಕೆ?,ಚುನಾವಣೆ ಸಮಯದಲ್ಲಿ ಅವರುಗಳು ಕೊಡು ಒ೦ದು ದಿನದ ಅನ್ನದಾನ,ವಸ್ತ್ರದಾನಗಳಿಗೆ ಮರುಳಾಗಿ ಚುನಾವಣಾ ಆಯ್ಕೆ ಪತ್ರಕ್ಕೊ೦ದು ಸೀಲು ಗುದ್ದಿ ಕಳಿಸುತ್ತೇವೆ. ಅವರ ದಾನಗಳು ಸತ್ತಾಗ ಕೊಡು ಕರ್ಮದಾನಗಳಾಗಿ ನಮಗೆ ಅನ೦ತರ ಅನಿಸುತ್ತದೆ.ಮಿ೦ಚಿಹೋದ ಘಟನೆಯ ಚಿ೦ತಿಸಿ ಫಲವೇನು??ಅನುಭವಿಸಬೇಕಲ್ಲವೇ?ಈಗ ಹೇಳಿ ತಪ್ಪು ಯಾರದ್ದು,ರಾಜಕಾರಣಿಗಳದ್ದೋ? ನಮ್ಮದ್ದೋ?

ಜನರೇ ಸರಿಯಾದ ಆಯ್ಕೆ ಮಾಡದಿದ್ದಾಗ,ಜನರ ಆಯ್ಕೆಯೇ ತಪ್ಪಾದಾಗ, ಆ ರಾಜಕಾರಣಿ ಸರಿಯಿಲ್ಲ ಎನ್ನುವುದು ಎಷ್ಟು ಸರಿ?ತಪ್ಪು ಇರುವುದು ನಮ್ಮಲ್ಲೇ.ನಮ್ಮ ಆಯ್ಕೆಗಳು ಯಾವತ್ತೂ ಸರಿ ಆಗದಿದ್ದಲ್ಲಿ ನಮ್ಮ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆ ಸಹಜವಾಗೇ ಬುಡಮೇಲಾಗುವದರಲ್ಲಿ ನಿಸ್ಸ೦ದೇಹವಿಲ್ಲ.ನಮ್ಮ ಆಯ್ಕೆ ಯಾವುತ್ತು ಚಿ೦ತನಾತ್ಮಕವಾಗುತ್ತೋ ಅ೦ದು ನಾವು ಉತ್ತಮ ರಾಜಕಾರಣಿಗಳನ್ನು ಪಡೆಯಲು ಸಾಧ್ಯ.ಇದಕ್ಕಾಗಿ ಯುವಜನತೆ ಸಿಡಿದೇಳಬೇಕು.ಅ೦ದರೆ ಮಾತ್ರ ನಮ್ಮ ಅರ್ಥವ್ಯವಸ್ಥೆ ಉಳಿಯಲು ಸಾಧ್ಯ.ಸ೦ಪತ್ತಿನ ಕೊಳ್ಳೆ ಹೊಡೆಯುವಿಕೆ ತಪ್ಪುತ್ತದೆ.ನೀವೇನ೦ತೀರಾ????

- ನಾಗಭೂಷಣ ಗುಮಗೋಡು.


ಭಾನುವಾರ, ಸೆಪ್ಟೆಂಬರ್ 16, 2012

ನನ್ನ ದೇವತೆ

ಎಲ್ಲಿಹಳೋ,ಹೇಗಿಹಳೋ
ಆ ನನ್ನ ದೇವತೆ?
ಕಣ್ಣಿಗೆ ನಿಲುಕದೆ ಮರೆಯಲ್ಲಿ
ನೀ ಎಲ್ಲಿ ಅಡಗಿರುವೆ?
ಯಾರಿಗೂ ನೀಡದ ನಿನ್ನ
ಹ್ರದಯವ ತೋಚದಂತೆ
ನೀ ಕೊಟ್ಟೆ ನನಗೆ!
ಕೊಟ್ಟೆ ಮನಸ ಹೆಸರ ಹೇಳದೆ,
ಮಾತನಾಡದೇ,ಪರಿಚಯವಾಗದೇ.
ಕನಸುಗಳ ಒಡತಿ ನಿನ್ನ ನೋಡದೆ
ಇರಬಹುದೇ ನಾನು ?
ಇಂದು...ಮುಂದು...ಎಂದೆಂದೂ...!



- ನಾಗಭೂಷಣ ಗುಮಗೋಡು.http://facebook.com/​nenapinadhoni

ಗುರುವೇ ನಮಹ!!

ಗುರು ಭ್ರಹ್ಮ ,ಗುರು ವಿಷ್ಣೋ ಗುರು ದೇವೋ ಮಹೇಶ್ವರ!!
ಶ್ರೀ ಗುರುಗಳ ಆಶೀರ್ವಾದವಿದ್ದಲ್ಲಿ ಯಾವುದೇ ಕೆಲಸಗಳು ನಿರ್ವಿಘ್ನವಾಗಿ ನೆರವೇರುವುದು.ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕ್ತಿ ಎ೦ದು ದಾಸಶ್ರೇಷ್ಟರ ಹೇಳಿರುವುದರಲ್ಲಿ ಉತ್ಪ್ರೇಕ್ಷೆ ಏನಿಲ್ಲ.
ತ೦ದೆ,ತಾಯಿ ಮತ್ತು ಗುರು,ಇವರುಗಳು ನಮ್ಮ ಪಾಲಿನ ಸಾಕ್ಷಾತ್ ದೇವರುಗಳು .ಅವರನ್ನ ಪೂಜಿಸಿ ಆರಧಿಸುವುದರಲ್ಲಿ ಯಾವ ತಪ್ಪು ಇಲ್ಲ.
ಆದ್ದರಿ೦ದ ನಾನು ಈ ಮಹಾನ್ ಚೇತನಗಳಿಗೆ ಶಿರಸಾ ವ೦ದಿಸುತ್ತೇನೆ.

-ನಾಗಭೂಷಣ ಗುಮಗೋಡು.http://facebook.com/nenapinadhoni